ಮೌನದ ಇರುಳಲಿ
ತಣ್ಣನೆ ಹವೆಯಲಿ
ಕುಳಿತಿದೆ ನಾನು
ಕೆರೆಯ ದಡದಲಿ
ನೀರಿನ ನಾದಕೆ
ಮೀನಿನ ನಾಟ್ಯಕೆ
ಮರಳಿತು ಹೃದಯವು
ನಿನ್ನಯ ನೆನಪಿಗೆ
ಎದೆಯಲಿ ಯಾತನೆ
ತಾಳದೆ, ಬಂಧು
ಮರೆಯಲೆ ಬೇಕು
ನಿನ್ನನು ಎಂದು
ಉಕ್ಕಿನ ಕವಚದಿ
ತುಂಬಿದೆ ನೆನಪು
ನನ್ನಲಿ ಉಳಿಸದೆ
ಸ್ವಲ್ಪವು ತುಣುಕು
ಕೆರೆಯ ಮಧ್ಯೆ
ಪೆಟ್ಟಿಗೆ ಬಿಟ್ಟು
ದಡಕೆ ಬರಲು
ಕಷ್ಟ ಪಟ್ಟು
ಮೇಲಕೆ ನೋಡಿದೆ
ನಿಟ್ಟುಸಿರಾಗಿ
ನಗುತಿದೆ ನೀನೆ
ಚಂದಿರನಾಗಿ
ಇನ್ನ್ಹೆಗೆ ಮರೆಯಲಿ
ಗೆಳತಿ ನಿನ್ನ
ನೆನಪಲೆ ಕಳೆಯುವೆ
ಬಾಳನು ಎನ್ನ
3 comments:
ಚೆನ್ನಾಗಿ ಬರ್ದಿದೀಯ...
ಸುಂದರ ಕವಿತೆ. ಸರಳತೆಯೆ ನಿಮ್ಮ ಕವನಗಳ ವೈಶಿಷ್ಟ್ಯ ಈ ಕವನವನ್ನು ನಿಮ್ಮ ಗೆಳೆತಿಗೆ ಬರೆದಿರುವದರಿಂದ ’ಬಂಧು’ ಎನ್ನುವ ಪದ ಅಲ್ಲಿ ಹೊಂದುವದಿಲ್ಲ.
ಸುನಾಥ್ ಅವರೆ...
ಮೆಚ್ಚುಗೆಗೆ ಧನ್ನ್ಯವಾದಗಳು.
ನಿಮ್ಮ ವಿಮರ್ಶೆಯನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ.
ಬರುತ್ತಿರಿ.
Post a Comment