Saturday, February 23, 2008

ನೀ ದೂರಾದ ಮೇಲೆ...

ನೀ ಹಾಡಿದ ಆ ಹಾಡಿಗೆ, ಶ್ರುತಿಯಾದೆ
ನಾ ಗೆಳತಿ...
ನೀ ಬರೆಯದ ಆ ಕವನಕೆ, ಧ್ವನಿಯಾದೆ
ನನ ಗೆಳತಿ...
ನೀ ನಡೆಯುವ ಸುಡು ದಾರಿಗೆ, ನೆರಳಾದೆ
ನಾ ಗೆಳತಿ...
ನೀ ಮುಡಿಯುವ ಮಂದಾರಕೆ, ಘಮವಾದೆ
ನನ ಗೆಳತಿ...
ಅರಿಯದೇ ನಿ ಹೋದೆ, ಮನದಾಳದ
ಈ ಪ್ರೀತಿ ...
ಇರುಳಾಯಿತು ನನ ಬಾಳಿಗೆ, ನೀನಿಲ್ಲದೆ
ಓ ಗೆಳತಿ...!!

Monday, February 4, 2008

ಹೇಳಿ ಹೋಗು ಕಾರಣ........

ಸಪ್ತ ಸಾಗರದ ಕೊನೆಯ ಹನಿಯು
ಬತ್ತಿ ಹೋಗುವ ಮುನ್ನ........
ನೀಲಿ ಆಗಸದ ಕೊನೆಯ ತಾರೆ
ಮರೆಯಾಗಿ ಹೋಗುವ ಮುನ್ನ........
ಮಗುವು ಕುಡಿದ ತಾಯಿ ಹಾಲೇ
ವಿಷವಾಗುವ ಮುನ್ನ........
ನನ್ನ ಹೃದಯ ಬಡಿತ ನಿಂತು
ನನ್ನ ಉಸಿರೇ ನಿಲ್ಲೊ ಮುನ್ನ........
ನಾನ್ಯಾಕೆ ಇಷ್ಟವಾಗಲಿಲ್ಲವೆಂದು
ಹೇಳಿಹೋಗು ನಿ ಕಾರಣ.