Saturday, February 23, 2008

ನೀ ದೂರಾದ ಮೇಲೆ...

ನೀ ಹಾಡಿದ ಆ ಹಾಡಿಗೆ, ಶ್ರುತಿಯಾದೆ
ನಾ ಗೆಳತಿ...
ನೀ ಬರೆಯದ ಆ ಕವನಕೆ, ಧ್ವನಿಯಾದೆ
ನನ ಗೆಳತಿ...
ನೀ ನಡೆಯುವ ಸುಡು ದಾರಿಗೆ, ನೆರಳಾದೆ
ನಾ ಗೆಳತಿ...
ನೀ ಮುಡಿಯುವ ಮಂದಾರಕೆ, ಘಮವಾದೆ
ನನ ಗೆಳತಿ...
ಅರಿಯದೇ ನಿ ಹೋದೆ, ಮನದಾಳದ
ಈ ಪ್ರೀತಿ ...
ಇರುಳಾಯಿತು ನನ ಬಾಳಿಗೆ, ನೀನಿಲ್ಲದೆ
ಓ ಗೆಳತಿ...!!

2 comments:

Harisha - ಹರೀಶ said...

ಯಾರೋ ಆ ನಿನ್ನ ಗೆಳತಿ?

Avinash Siddeshware said...

ಹರೀಶ್....
ಇದು ಕೇವಲ ಕಲ್ಪನೆ ಕಣೋ
ರವಿ ಕಾಣದ್ದನ್ನು ಕವಿ ಕಂಡ